Sunday, February 18, 2018

ಆರಾಧನೆ


ಎನಿತು ವರ್ಣಿಸಲಿ ನಿನ್ನ ಪ್ರೀತಿ 
ಹೃದಯಗಳ ಬೆಸೆಯಲು ನೀ ಹೆಣೆದ ರೀತಿ 
ಬಂದನಕೆ  ಕಾರಣ ಪ್ರೇಮ ಕಸೂತಿ 
ಬಣ್ಣ ಬಳಿವ ಆಸೆಗಳಿಗಿಲ್ಲ ಪರಿಮಿತಿ 

ಪ್ರೇಮ ದೀವಿಗೆಯ ಬೆಳಕ ಕಾಂತಿ 
ಜೀವನ ದೇವತೆಗೆ ಮಂತ್ರ ಸ್ತುತಿ 
ಆರಾಧನೆ ಪ್ರೇಮರಾದನೆಗಿಲ್ಲ ಮಿತಿ 
ಬರೆಯುತಿಹನಲ್ಲೆ  ನಿನ್ನ ನೆನೆದೀಕೃತಿ 

ಬಾಳ ಬೆಳಗುತಿರು ದಿವ್ಯ ಜ್ಯೋತಿ 
ಉಸಿರಿಗೆ ಆಸರೆಯಾಗುವೆ ಜೀವಸತಿ 
ಬದುಕ ಭವ್ಯತೆಗೆ ಬಂಗಾರದ ನೀತಿ 
ಅರಿತು ಬಾಳುವ ಎಂದಿಗೂ ನಾವು ಸತಿಪತಿ 

ಪೀತಿಯುಯ್ಯಾಲೆಯಲಿ  ತೂಗುತಿಹುದೆನ್ನ ಮತಿ 
ಹೃದಯ ಗೀತೆಯ ಹಾಡು ಗೆಳತಿ 
ಕೇಳುತ ಪವಡಿಸುವೆ ನಿನ್ನುಸಿರೇ-ಶ್ರುತಿ 
ಆರಾಧನೆ ಪ್ರೇಮರಾದನೆಯೇ ಪ್ರೀತಿ 

                                       ----ಮಂಜುನಾಥ್ ಗುಜ್ಜಾಡಿ 

Thursday, October 16, 2014

ಮುರುಡೇಶ್ವರದ ಯಕ್ಷ ರಕ್ಷೆಯ ಹರಿಕಾರರಿಗೊಂದು ನಮನ

ಡಾ. ಐಯ್. ಆರ್ ಭಟ್ ರವರನ್ನು ನಾನು ಪ್ರಥಮವಾಗಿ ಭೇಟಿಯಾದದ್ದು ಜನವರಿ ೨೧ ೨೦೧೩ ರಂದು ಮುರುಡೇಶ್ವರ ಜಾತ್ರೆಯ ಯಕ್ಷ ರಕ್ಷೆಯ ಚಿತ್ರಾಕ್ಷಿ ಕಲ್ಯಾಣವೆಂಬ ಯಕ್ಷಗಾನ ಕಾರ್ಯಕ್ರಮಕ್ಕೆ ಅತಿಥಿ ಕಲಾವಿದನಾಗಿ ಬಂದಾಗ . ಈ ಸೌಭಾಗ್ಯವನ್ನು ನನಗೆ ನೀಡಿದವರು ಯಕ್ಷ ರಕ್ಷೆಯ ಕಾರ್ಯದರ್ಶಿಯಗಿರುವ ಗಣಪತಿ ಕಾಯ್ಕಿಣಿಯವರು.ಯಕ್ಷರಕ್ಷೆಯ ಮನೆಯೊಳಗೆ ಬಂದಾಗ ಇಲ್ಲಿಯ ಸುಂದರ ವ್ಯವಸ್ಥೆ ,ರಂಗಸ್ತಳ, ಚೌಕಿ ಮನೆ ,ಸಾಹಿತ್ಯ ಪುಸ್ತಕಗಳ ಭಂಡಾರ ,ಚೌಕಿ ಮನೆಯ ಮಾಡಿಗೆ ನೇತು ಹಾಕಿದ ಕಲಾವಿದರ ಚಿತ್ರಪಟ ,ಶ್ರುತಿ ಪೆಟ್ಟಿಗೆ,ಮದ್ದಳೆ ,ಚಂಡೆ,ತಾಳ ,ಒಡ್ಡೋಲಗದ ನೀಲಿ ಬಣ್ಣದ ಪರದೆಗಳನ್ನೆಲ್ಲ ಕಂಡಾಗ ಈ ಪರಿಯಲ್ಲಿ ಕಟ್ಟಿ ಬೆಳೆಸಿದ ಪುಟ್ಟ ಯಕ್ಷಕಾಶಿಯ ಯಶಸ್ವಿ ಹರಿಕಾರ ಡಾ. ಐಯ್. ಆರ್ ಭಟ್ ರವರು ಎಂದಾಗ ಯಕ್ಷ ಮಾತೆಯ ಆರಾಧಕನದ ನನಗೆ ಹೃದಯ ತುಂಬಿ ಬಂತು, ಅವರ ಸಾದನೆಗೆ ಮನದಲ್ಲೇ ನೆನೆದೆ. ಅಲ್ಲಿಂದ ಇಲ್ಲಿಯವರೆಗೆ ಅವರು ಆಯೋಜಿಸಿದ ಅದೆಷ್ಟೋ ಕಾರ್ಯಕ್ರಮಗಳಲ್ಲಿ ನಾನು ಕಂಡದ್ದು ಅವರ ಉತ್ಸಾಹದ ಚಿಲುಮೆ , ಸ್ಪೂರ್ತಿ , ಧನಾತ್ಮಕ ಚಿಂತನೆ ,ಕಲಾವಿದರನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದ ಕಲಾ ಪೋಷಕ ಗುಣ.

ಅವರು ಅದೆಷ್ಟು ಯಕ್ಷಗಾನವನ್ನು ಪ್ರೀತಿಸುತ್ತಿದ್ದರೆಂದರೆ ಅವರ ಚರದೂರವಾಣಿಯ ರಿಂಗಣ ಯಕ್ಷಗಾನ ಪದವಾಗಿತ್ತು , ಭಟ್ಟರು ಬೆಳಗ್ಗೆ ಎದ್ದು ಮೊದಲು ಬರುವುದು ಯಕ್ಷ ರಕ್ಷೆಗೆ. ಅಲ್ಲಿ ಹಾಡುತ್ತಿದ್ದ ಮದುರ ಕೋಗಿಲೆ ದಿ. ಕೊಪ್ಪದಮಕ್ಕಿ ಈರಪ್ಪ ಭಾಗವತರು ತಾಳ ಹಿಡಿದು ಹಾಡಿದರೆ ಸಾಕು ನಮ್ಮ ಭಟ್ಟರು ಮದ್ದಳೆ ಹಿಡಿದು ಲಯಬದ್ದವಾಗಿ ಭಾರಿಸುತ್ತಿದ್ದರೆ ಯಕ್ಷ ಲೋಕವೇ ಸೃಷ್ಟಿಯಾಗುತ್ತಿತ್ತು. ರಾತ್ರಿಯ ಯಕ್ಷ ರಕ್ಷೆಯ ಆಟ ಮುಗಿಸಿ ಅಲ್ಲಿಯೇ ಮಲಗಿ ಬೆಳೆಗ್ಗೆ ಎದ್ದಾಗ ಕಂಡ ಈ ಪುಟ್ಟ ಲೋಕ ಮರೆಯಲಸದಳ . ಯಕ್ಷ ರಕ್ಷೆಯನ್ನು ತನ್ನ ಮನೆಯ ಪಕ್ಕದಲ್ಲೇ ಕಟ್ಟಿ ಬೆಳೆಸಿ , ರಕ್ಷಣಾ ಕವಚದಂತಿರುವ ನಮ್ಮ ಭಟ್ಟರು ವೈದ್ಯರಾಗಿಯು ತನ್ನ ಕೈ ಗುಣ ಆರೈಕೆಯಿಂದ ಜನ ಮನ ಗೆದ್ದವರು. ನಮ್ಮ ಕಾಯಿಲೆ ಗುಣವಾಗಲು ಮನೋ ಸ್ಥೈರ್ಯ ಮುಖ್ಯ ಎನ್ನುತ್ತಿದ್ದರು ,ವೈದ್ಯರಾಗಿಯೂ , ಯಕ್ಷ ರಕ್ಷಕರಾಗಿಯೂ ಅವರು ಮಾಡಿದ ಸಮಾಜ ಮುಖಿ ಕೆಲಸ ಶ್ಲಾಘನೀಯ . ಯಕ್ಷ ಸ್ವರ ತಾಳದೊಂದಿಗೆ ಭವ್ಯ ಬದುಕಿನ ಲಯ ಕಂಡುಕೊಂಡ ಯಕ್ಷ ರಕ್ಷೆಯ ಸಾರಥಿ ಭಟ್ಟರ ಹಳೆಬೇರ ಹೊಸ ಚಿಗುರ ಆವಿಷ್ಕಾರ , ಬೆಳೆವ ಯಕ್ಷ ಸಾಮ್ರಾಜ್ಯಕ್ಕೆ ಭದ್ರ ಬುನಾದಿಯಗಲಿ,ಹೊಳೆವ ಯಕ್ಷ ಭ್ಯಾಗಡೆಗೆ ಮತ್ತಷ್ಟು ಹೊಳಪು ಕೊಟ್ಟು ಧರಿಸಿದ ಕಲಾವಿದರ ವೇಷಕ್ಕೆ ಮೆರುಗು ಕೊಡಲಿ,ಯಕ್ಷ ರಕ್ಷೆಯ ಮನೆಗೆ ಬೆಳಕು ಕೊಟ್ಟ ಅಯ್ಯರೆಂಬ ದಿವ್ಯ ದೀವಿಗೆ ಸದಾ ಉರಿಯುತಿರಲಿ , ಬೆಳಗುತಿರಲಿ ನಿರಂತರ.

ಬೆಳಗು ನಿರಂತರ ಯಕ್ಷರಕ್ಷೆಯೆಂಬ ದೀಪ
ಆರದಂತೆ ಕಾಯುತಿಹುದು ಅಯ್ಯರೆಂಬ ರೂಪ
ಧೀಂಕಿಟಕೆ ಕುಣಿವರೆಲ್ಲ ಈಬೆಳಕ ಪ್ರತಾಪ
ಯಕ್ಷಗಾನ ರಕ್ಷಕನೀ ಸಾದನೆ ಬಲು ಅಪರೂಪ.

ಯಕ್ಷ ರಕ್ಷೆಯ ಹರಿಕಾರನಿಗೊಂದು ನುಡಿ ನಮನ ,ಇಂತಿ ನಿಮ್ಮ ಕಲಾವಿದ ,
ಮಂಜುನಾಥ್ ಬಿಲ್ಲವ ಗುಜ್ಜಾಡಿ.

Friday, November 29, 2013

ಮನಸ್ಥಿತಿ

ಮನಸೇ ನಿನಗ್ಯಾಕೆ  ಇಂಥಾ ಮನಸ್ಥಿತಿ ,
ಮನಸು ಮನಸನೆ ಅರಿಯದ ನಿನ್ನಿಸ್ಥಿತಿ ,
ಅರುಹದೆ ನುಡಿವೆ ಇಲ್ಲದೆ ಇತಿಮಿತಿ ,
ಸತ್ಯವನರಿಯುತ ಉಸುರು ಇರಲಿ ಮತಿ .

ಗಾಳಿಯ ಮಾತಿಗೆ ಲಾಗವ ಹಾಕದಿರು ,
ಅರಿಯದೆ ಅನ್ಯ ಮನಸನು ದೂರದಿರು,
ಕುರುಡು ಪ್ರೀತಿಯ ಹೊದ್ದು ಮಲಗದಿರು,
ಅನ್ಯರ ಕಷ್ಟವ ನೀ ಅರಿಯುತಿರು.

ಸಹಾಯವೆಂಬ ಜೀವ ಸದಾ ನಿನ್ನೊಲಿರಲಿ,
ಸ್ನೇಹವೆಂಬ ಅಮೂಲ್ಯ ಮುತ್ತು ಒಡೆಯದಿರಲಿ ,
ಅರಿತು ನುಡಿವ ಮಾತು ಹಿತವಾಗಿರಲಿ,
ನೋವ ಕೊಡುವ ಬುದ್ದಿ ದೂರವಿರಲಿ.

ಜೀವ ಕೊಡುವ ಮನಸನು ಕಾಪಾಡು ,
ಜೀವನವನೆ ನುಂಗುವ ಕುಹಕಿಯ ಬಿಸಾಡ್ಹು ,
ಮನಸೇ ನೀ ಮನಸಲಿ ವೂಲುಮೆಯಿಡು ,
ಮಾತಿನಲಿ ನೋಯಿಸುವ ಗುಣ ಬಿಡುಬಿಡು.

Friday, May 17, 2013

ಸ್ನೇಹದ ನೋವು ನಲಿವು

ಕೇಳಿದೆನು ಇಂಪಿನ ಸ್ವರವ ಮುನ್ನ
ಓಕೋಗಿಲೆಯೇ ಹೇಗೆ ಮರೆಯಲಿ ನಿನ್ನ 
ಮತ್ತೆ ನಿನ್ನ ಗೆಳೆತನದ ನೆನಪನ್ನ
ಮರೆಯಲಾಗದು ನನ್ನ ಮುದ್ದು  ಚಿನ್ನ

ನಿಗೂಡ ನಿನ್ನ ಹುಟ್ಟು ಕಥೆ
ತಾಯಿಯಾರ್ರೋ ಆದರೂ ನಿನಗಿಲ್ಲ ವ್ಯಥೆ
ಎಂದೆಂದು ಹೊಳೆಯುವುದು ಸ್ವರವೆಂಬ ಸ್ವರ್ಣಲತೆ
ನಾಕಾಗೆಯಾದರು ಒಡನಾಟವು ಮರೆಯಾಯ್ತೆ 

ಓಕೋಗಿಲೆ ಸ್ವರದ ಅಹಂಕಾರ ನಿನಗಿಲ್ಲ
ಕಾಗೆಯೆಂದು ನೀ ಎನ್ನ ಕಂಡಿಲ್ಲ
ಬೆಳೆಯ ಬೆಳೆಯುತ್ತ ದಯಾದಿಗಲು ನಾವಗಿಲ್ಲ
ಅಗಲುವಿಕೆಯೆಂಬ ಸಂಕಟ ಕೊನೆಗೂ ಬಿಡಲಿಲ್ಲ

ಮನದಲ್ಲಿ ಉಳಿದಿಹುದು ಅನೇಕ ವಿಷ್ಯ
ಹೇಳಲಾರೆ ಕೋಗಿಲೆ  ಕಹಿ ಸತ್ಯ
ಸಿಹಿ ಸುಳ್ಳು ಭಾದಿಸದು ಕೇಳಯ್ಯ
ನಗುನಗುತ ಬಾಳು ಎಂದೆಂದು ನೀನಯ್ಯ

Monday, May 13, 2013

ಸ್ನೇಹದ ಮೌಲ್ಯ


 ಓಗೆಳೆಯ ಅಗಲಿ ಹೋಗುವುದು ಅನಿವಾರ್ಯ
ಮರೆಯಬೇಡ ಸ್ನೇಹದಿ ಗೈದ ಕಾರ್ಯ
ಉದ್ಯೊಗಪರ್ವದಿ ಮೆರೆಯಲಿ ನಿನ್ನ ಶೌರ್ಯ
ಎಲ್ಲ ಪಡೆಯಲಿ - ಅರಿಯಲಿ ನಿನ್ನ ಮೌಲ್ಯ .

ಪ್ರೀತಿ ತುಂಬಿದ ಮನದಲಿ ಹರಸುವೆನು
ಯಶಸ್ಸು ನಿನ್ನದಾಗಲಿ ಎಂದು ಬೇಡುವೆನು
ಅಗಲಿಕೆ  ತರುತಿಹುದು  ಕಣ್ಣೀರ ಹನಿಯನು
ನಿನ್ನ ಉತ್ತಮ ಭವಿಷ್ಯಕ್ಕಾಗಿ ಸಹಿಸಿಹೆನು

ಸುಖ- ದುಃ ಖಗಳೆರಡು  ಬದುಕ ಹಾದಿಯಲಿ
ಗೆದ್ದು ಬಾ ಬದುಕೆಂಬ ಯುದ್ದದಲಿ
ಏರಲಿ ಕೀರ್ತಿ ಪತಾಕೆ ಹಾರಲಿ
ಕಾಯುತಿರುವೆನು ಎಂದೆಂದೂ ನೀಬರುವ ಹಾದಿಯಲಿ




Thursday, May 9, 2013

ಅರಿಯೋ ಎನ್ನ ಮನ

ಪ್ರೀತಿಯ ಗೆಳೆತನದ ಬಂದದ ಬೆಸುಗೆ
ನುಡಿಯೆoಬ ರಕ್ತ ಸ್ನೇಹದ ನರದೊಳಗೆ
ಸಂಚಲನವಾಗಬೇಕು ಗೆಳೆಯರಿಬ್ಬರೊಳಗೆ
ಹರಿಸುವವರ್ ಯಾರು ಹೇಗೆ ಆಬಗೆ

ಸ್ನೇಹವು ಹತ್ತಿರವಿದ್ದಾಗ ಸಂತಸದ ನಗೆ
ದ್ವೇಷವು ದೂರವಾದರೆ ಸ್ನೇಹಕ್ಕೆ ಬೆಲೆ
ನಗುವು ಕೊಡುವುದು ಜೀವನಕ್ಕೆ ಕಳೆ
ಒಂದಾಗುವುದೇ ಸ್ನೇಹ ಸ್ಪೂರ್ತಿಯ ಸೆಲೆ

ಹೃದಯದ ನೋವ ತಿಳಿವುದು ಸ್ನೇಹ
ಬಿಡು ಬಿಡು ದುರಲೋಚನೆಗಳ ಮೋಹ
ಕೊಡು ಕೊಡು ಸ್ನೇಹ ಹಸ್ಥವ ಗೆಳೆಯ
ನಿಷ್ಕಲ್ಮಶವಯ್ಯೆ ಅರಿಯೋ ಎನ್ನ ಮನ


Thursday, February 11, 2010

ಪ್ರೀತಿಯ ಮುಸುಕು

ಪ್ರೇಮ ದುಂಭಿಯನೊಮ್ಮೆ ನೋಡೇ
ಮುಸುಕ ತೆಗೆಯೇ ಮಮತೆಯ ಹೂವೇ .

ಮಂಜು ಕವಿದ ಪ್ರೀತಿಯ ಪ್ರಕೃತಿ
ಭಾವನೆಗಳ ಬಿಚ್ಚಿಡುವ ಪ್ರಣಯದ ರೀತಿ
ಪ್ರೇಯಸೀ ನೀ ಎಲೆಯ ಮೇಲೀನ ಹನಿ
ಬದುಕಲಾರೆನು ಕೈಜಾರಿದರೆ ಬಾ ರಮಣಿ.

ಪ್ರೇಮ ದುಂಭಿಯನೊಮ್ಮೆ ನೋಡೇ
ಮುಸುಕ ತೆಗೆಯೇ ಮಮತೆಯ ಹೂವೇ .

ಹಾರುತ ಬರುತಿರೆ ನಿನ್ನಯ ಬಳಿಗೆ
ಸಿಲುಕಿಹೇ ನಿನ್ನಯ ಪ್ರೀತಿಯ ಸುಳಿಗೆ
ಬರಬಾರದೆ ಕೈ ಹಿಡಿದು ಸನಿಹಕೆ
ಪ್ರೀತಿಯ ತೇರನು ನೋಡುವ ಅನಿಸಿಕೆ.

ಪ್ರೇಮ ದುಂಭಿಯನೊಮ್ಮೆ ನೋಡೇ
ಮುಸುಕ ತೆಗೆಯೇ ಮಮತೆಯ ಹೂವೇ .

ಮೊದಲ ಮಳೆಗೆ ಹಸಿಯಾದ ಭೂಮಿ
ಮಲ್ಲಿಗೆಯಾಗಿ ಮಾಮರವ ತಬ್ಬಿಬಾ ಪ್ರೇಮಿ
ಅರಳಿ ಚೆಲ್ಲಬಾರದೆ ನಗೆಯ ಚೆಲುವೆ
ಈಗಲಾದರೂ ಮುಸುಕ ತೆಗೆ ತಬ್ಬಿದ ಹೂವೇ .

ಪ್ರೇಮ ದುಂಭಿಯನೊಮ್ಮೆ ನೋಡೇ
ಮುಸುಕ ತೆಗೆಯೇ ಮಮತೆಯ ಹೂವೇ .